10 ನೇ ತರಗತಿ ಗಣಿತ ವಿಷಯದಲ್ಲಿ 80 ಕ್ಕೆ 80 ಅಂಕಗಳನ್ನು ಹೇಗೆ ಪಡೆದುಕೊಳ್ಳಬೇಕು ?

 


ಆತ್ಮೀಯ ವಿದ್ಯಾರ್ಥಿಗಳೇ ಹತ್ತನೇ ತರಗತಿ ಎಲ್ಲರ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಹತ್ತನೇ ತರಗತಿಯ ಗಣಿತ ಬಹುತೇಕ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ. ಈ ಅಭಿಪ್ರಾಯವನ್ನು ತೊಡೆದುಹಾಕಿ, ವಿದ್ಯಾರ್ಥಿಗಳು ಗಣಿತವನ್ನು ಪ್ರೀತಿಯಿಂದ ಅಧ್ಯಯನ ಮಾಡಿ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಉತ್ತಮ ಸಾಧನೆ ಮಾಡುವಂತಾಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಈ ವರ್ಷ ಸಂಪನ್ಮೂಲಭರಿತ ಕೈಪಿಡಿಯನ್ನು ಹೊರತಂದಿದ್ದೇವೆ. ಇದನ್ನು ಬಳಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಣಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಈ ಕೈಪಿಡಿ ಸಹಕಾರಿಯಾಯಿತೆಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ನಮ್ಮ ಶ್ರಮಕ್ಕೆ ಸಂದ ಜಯವಾಗಿದೆ. ಆದರೂ ನಮ್ಮ ಕಣ್ಣಪ್ಪಿನಿಂದ ಚಿಕ್ಕ-ಪುಟ್ಟ ದೋಶಗಳು ಉಳಿದುಹೋಗಿದ್ದವು. ಅನೇಕ ಶಿಕ್ಷಕ ಮಿತ್ರರ ಸಲಹೆಯನ್ನು ಪಡೆದು ಪ್ರಸಕ್ತ ಸಾಲಿನಲ್ಲಿ ಪುಸ್ತಕವನ್ನು ಮರುಪರಿಷ್ಕರಣೆ ಮಾಡಲಾಗಿದೆ. ಈ ಕೈಪಿಡಿಯನ್ನು ನೀವುಗಳು ವರ್ಷದ ಪ್ರಾರಂಭದಿಂದಲೇ ಅಭ್ಯಾಸ ಮಾಡಿದರೆ ನಿಮ್ಮ ನಿರೀಕ್ಷೆಗೂ ಮೀರಿದಂತಹ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ.


DOWNLOAD NOW