ಅಂಚೆ ಇಲಾಖೆಯ ಹೊಸ ಯೋಜನೆ| 50 ರೂ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸಿ.

 

ಅಂಚೆ ಇಲಾಖೆಯ ಹೊಸ ಯೋಜನೆ|50 ರೂ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸಿ.

ನಮ್ಮ ದೇಶದಲ್ಲಿರುವಂತಹ ಅಂಚೆ ಇಲಾಖೆಯಲ್ಲಿ ಹೂಡಿಕೆ ಅಥವಾ ಉಳಿತಾಯ ಮಾಡಿದರೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಎಂದು ಹೇಳುತ್ತಾರೆ.ಇದೇ ಕಾರಣದಿಂದ ಭಾರತದಲ್ಲಿ ಹೆಚ್ಚು ಜನರು ಹೂಡಿಕೆ ಅಥವಾ ಉಳಿತಾಯ ಮಾಡಲು ಅಂಚೆ ಇಲಾಖೆಯನ್ನು ಅವಲಂಬಿಸಿದ್ದಾರೆ.ಇದು ಬೇರೆ ಸಂಸ್ಥೆಗಳಿಗಿಂತ ಸುರಕ್ಷಿತ ಮತ್ತು ಲಾಭದಾಯಕವಾಗಿದೆ.ಅದೇ ರೀತಿ ಇಂದಿನ ಈ ಒಂದು ಲೇಖನದಲ್ಲಿ ಯಾವ ರೀತಿ ಪೋಸ್ಟ್ ಆಫೀಸ್ ಗಳಲ್ಲಿ ಹೂಡಿಕೆ ಮಾಡಿ ದೊಡ್ಡ ಮಟ್ಟದಲ್ಲಿ ಹೇಗೆ ಲಾಭವನ್ನು ಗಳಿಸಬಹುದೆಂದು ತಿಳಿಸಿಕೊಡುತ್ತೇನೆ.ಈ ಲೇಖನವನ್ನು ಓದುತ್ತಿರುವಂತಹ ನಿಮಗೆಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತಾ,ನಾನು ನಿಮಗೆ ಹೇಳಲು ಹೊರಟಿರುವ ಯೋಜನೆಯ ಹೆಸರು ಗ್ರಾಮ ಸುರಕ್ಷಾ ಯೋಜನೆ.


ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಯಾರು ಹೂಡಿಕೆ ಮಾಡಬಹುದು ?

 ಈ ಒಂದು ಯೋಜನೆಯಲ್ಲಿ 19 ರಿಂದ 55 ವರ್ಷ ಒಳಪಟ್ಟ ಜನರು ಹೂಡಿಕೆ ಮಾಡಬಹುದು.ಹತ್ತು ಸಾವಿರ ರೂಗಳಿಂದ ಪ್ರಾರಂಭಿಸಿ 10 ಲಕ್ಷ ರೂಗಳ ವರೆಗೆ ಹೂಡಿಕೆ ಮಾಡಬಹುದು.


ಯಾವ ರೀತಿ ಹೆಚ್ಚಿನ ಲಾಭ ಪಡೆಯಬಹುದು ?

 ಈ ಯೋಜನೆಯ ಅಡಿಯಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ 50 ರೂ ಗಳಂತೆ ತಿಂಗಳಿಗೆ 1515 ರೂ ಹೂಡಿಕೆ ಮಾಡಿದರೆ 35 ಲಕ್ಷ ರೂಪಾಯಿ ರಿಟರ್ನ್ ಸಿಗುತ್ತದೆ.ನೀವು 19ನೇ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ 55 ವರ್ಷಗಳಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು.ನೀವು 58 ವರ್ಷಗಳವರೆಗೆ ಹೂಡಿಕೆ ಮಾಡಿದರೆ ತಿಂಗಳಿಗೆ 1463 ರೂ ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿ 60 ವರ್ಷಗಳವರೆಗೆ ಹೂಡಿಕೆ ಮಾಡಿದರೆ ನೀವು ತಿಂಗಳಿಗೆ 1511 ರೂಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವು ಪ್ರೀಮಿಯಂ ಅನ್ನು ಕಳೆದುಕೊಂಡರೆ 30 ದಿನಗಳಲ್ಲಿ ಅದನ್ನು ಠೇವಣಿ ಮಾಡಬಹುದು. 55 ವರ್ಷಗಳಿಗೆ ಹೂಡಿಕೆ ಮಾಡಿದರೆ 31.60 ಲಕ್ಷ ರೂಗಳನ್ನು, 58 ವರ್ಷ ಹೂಡಿಕೆ ಮಾಡಿದರೆ 33.40 ಲಕ್ಷ ರೂಗಳನ್ನು, 60 ವರ್ಷ ಹೂಡಿಕೆ ಮಾಡಿದರೆ 34.60 ಲಕ್ಷ ಪಡೆಯಬಹುದು.ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ 80 ವರ್ಷಗಳ ನಂತರ ಲಾಭವನ್ನು ಪಾವತಿಸಲಾಗುತ್ತದೆ.ಈ ಯೋಜನೆಯ ವಿಶೇಷತೆ ಏನೆಂದರೆ ಪ್ರತಿವರ್ಷಕ್ಕೆ 1000 ರೂಪಾಯಿಗಳಂತೆ 60 ರೂಪಾಯಿ ಬೋನಸ್ ಪಡೆಯಬಹುದು. ಈಗಲೇ ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಿ.ಇಲ್ಲಿಯವರೆಗೆ ತಾಳ್ಮೆಯಿಂದ ವೀಕ್ಷಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.